Thursday, May 9, 2013

Excuse me please!! :D

Hmm.. Posting this on behalf of my friend. :D So one of my best friends run an IT services start-up along with his friends based in namma Bengaluru. Yesterday he receives a call from some random girl. He picks up the call.

He - Hello
She - Hello Sir. er.. hello sir.
He - Yes hello. Go ahead please.
She - Sir u have any job opening in your company?
He - Your name please?
She - Sir i'm girl abc from Mysore
He - What's your qualification? What kind of job you are looking for?
She - Sir i know web designing. So i'm looking for designing job..
He - Okay.. how did you get my number?
She - Sir one of my friend gave me.

He remembers a girl who failed the interview couple of months ago. He presumes this is her friend.  As he was looking for a UI designer, he asks her to forward her resume.

He - Okay then please forward me your updated resume.
She - Okay sir your e-mail ID please.
He - Yes note down. Its abc@xyz.com

He spells it. Repeats twice.

She - Okay sir thank you.

About 5 minutes later, she calls again.

She - Sir.. er.. i dint get your email..
He - Wait. What? Okay i'll text you my email.

And.. the convo starts in the e-mail -


So what she does is she downloads a ready template, alters it a bit, renames it and sends it claiming its done by herself! :D Just like her friend who attended the interview couple of months ago.

And now over the text messages -

He is a busy dude and his patience must be appreciated! :D He sent me the screenshots and was speechless. :D I'm posting this hoping our freshers can learn something from this. What NOT to do. Most of our freshers have these kind of excuses. So lot of jobs in namma Bengaluru is snatched by outsiders?! I think here you have one of the reasons :D  

Sunday, January 8, 2012

Facebook Checkpoint ನಲ್ಲಿ ಸ್ಟ್ರಕ್ ಆಗುತ್ತಿರುವ ಜನ!

Facebook ಬಹಳಾ ಪ್ರಭಾವಶಾಲಿ, ಶಕ್ತಿಶಾಲಿ ಸಾಮಾಜಿಕ ತಾಣ. ಆದರೆ ಅದನ್ನ ಒಳ್ಳೇ ಕೆಲಸಗಳಿಗೆ ಬಳಸುತ್ತಿರುವುದಕ್ಕಿಂತ ಅಪಾಯಕಾರಿ ಚಟುವಟಿಕೆಗಳಿಗೆ ಬಳಸುತ್ತಿರುವುದೇ ಹೆಚ್ಚು ಎಂಬ ಆರೋಪ ಹಾಗೂ, ದಿನೇ ದಿನೇ ನಕಲಿ ಖಾತೆಗಳ ಸೃಸ್ಟಿ ಜಾಸ್ತಿಯಾಗುತ್ತಿದೆ ಎಂಬ ಆರೋಪ ಕೇಳಿದ ನಂತರ ಅದನ್ನ ನಿಯಂತ್ರಿಸಲು ಹೊಸದೊಂದು ಕ್ರಮವನ್ನ Facebook ಕೈಗೊಂಡಿದೆ. ಅದೇ ಈ "Checkpoint"! ಆದರೆ ಈ ಚೆಕ್ ಪಾಯಿಂಟ್ ನಿಂದಾಗಿ ಹಲವಾರು ಅಸಲಿ ಖಾತೆಗಳನ್ನೂ Facebook ಕಳೆದುಕೊಳ್ಳುತ್ತಿದೆ ಎಂಬುದು ಇನ್ನೂ ಅದರ ಗಮನಕ್ಕೆ ಬಂದಂತಿಲ್ಲ. Facebook ನ Checkpoint ಪುಟದ screenshot ಒಮ್ಮೆ ನೋಡಿ. ನನ್ನ ಸ್ನೇಹಿತನೊಬ್ಬನಿಂದ ಇದರ ಬಗ್ಗೆ ತಿಳಿಯಿತು. ಆತ ಲಾಗಿನ್ ಆದ ಕೂಡಲೇ ಈ Checkpoint ಪುಟಕ್ಕೆ ತಂದು ನಿಲ್ಲಿಸಿತಂತೆ. ಈ xxxxxxxx69 ನಂಬರ್ ಗೆ ಒಂದು ಕೋಡನ್ನ ಕಳಿಸಿದ್ದೇವೆ, ಅದನ್ನ ಇಲ್ಲಿ ತಂದು ಹಾಕಿದರೆ ಮಾತ್ರ ನಿನಗೆ ಒಳ ಪ್ರವೇಶ ಅಂತಂತೆ! ಆದರೆ ಅದು ಹಳೇ ನಂಬರ್! ಪಾಪ ಅವನು ಇತ್ತೀಚಿಗೆ ತನ್ನ ನಂಬರ್ ಬದಲಿಸಿದ್ದಾನೆ. ಈಗ Facebook ನಲ್ಲಿರುವ ಹಳೇ ನಂಬರ್ರಿಗೂ ಇವನಿಗೂ ಸಂಭಂದವೇ ಇಲ್ಲ. ಹೊಸ ನಂಬರ್ ಅನ್ನ Facebook ಖಾತೆಗೆ ಅಪ್ಡೇಟ್ ಮಾಡಲು ಮರೆತಿದ್ದಾನೆ. ವಿಚಿತ್ರ ಏನಂದ್ರೆ, ಈ Checkpoint ಪುಟದಲ್ಲಿ ನಂಬರ್ ಬದಲಿಸಲು ಯಾವುದೇ ಸೌಲಭ್ಯವನ್ನ ಕಲ್ಪಿಸಲು Facebook ಮರೆತಂತಿದೆ! ಹೀಗಾಗಿ ಬಹಳಷ್ಟು ಜನ ಈ "Checkpoint ನಲ್ಲಿ ಸ್ಟ್ರಕ್ ಆಗಿಬಿಟ್ಟಿದ್ದಾರೆ! 

Got this information from a friend of mine. Facebook is asking him to go through a security checkpoint, where it asks him to confirm or verify his account by a code sent to a phone number associated with the account. But he has changed his number couple of months ago and unfortunately, he forgot to update his new number to Facebook. And the issue here is, there is NO provision in this "Checkpoint" to change the number. So hes not able to login. With this insane Checkpoint thing, Facebook is loosing lots of "Original" accounts too!

Friday, January 6, 2012

'ಭಾರ'ತೀ ಏರ್ಟೆಲ್ ಗೆ ಅದೆಂತಹ ಹುಚ್ಚು ಹಸಿವು?!

ಅನಿರೀಕ್ಷಿತವಾಗಿ ನಿಮ್ಮ ಮನೆಯ ಬಾಗಿಲಿಗೆ 'ಪ್ಲೇಬಾಯ್' ಮ್ಯಾಗಜಿನ್ ಬಂದು ಬಿದ್ದಿರುತ್ತದೆ. ಜೊತೆಗೆ, ಆ ಮ್ಯಾಗಜಿನ್ ಕವರ್ ನ ಮೇಲೆ ಒಂದು ಪತ್ರವನ್ನೂ ಸಹ ಅಂಟಿಸಿರಲಾಗಿರುತ್ತದೆ. ಆ ಪತ್ರದಲ್ಲಿ ಹೀಗೆ ಬರೆದಿರುತ್ತದೆ- "ನಮ್ಮ ಪ್ಲೇಬಾಯ್ ಮ್ಯಾಗಜಿನ್ ಗೆ ಚಂದಾದಾರರಾಗಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನ ನಾವು ಅರ್ಪಿಸುತ್ತೇವೆ. ನಮ್ಮ ಈ ಪ್ಲೇಬಾಯ್ ಮ್ಯಾಗಜಿನ್ ನ ಚಂದಾದಾರರಾಗುವ ಮೂಲಕ ನೀವು ಜಗತ್ತಿನ 'ಪ್ರತಿಷ್ಟಿತ'ರ ಸಾಲಿಗೆ ಸೇರಿದ್ದೀರಿ. ಅದಕ್ಕೆ ನಾವು ನಿಮ್ಮನ್ನ ಅಭಿನಂದಿಸುತ್ತಿದ್ದೇವೆ. ಈ ಮ್ಯಾಗಜಿನ್ ನ ಬೆಲೆ 150 ರೂಪಾಯಿ ಹಾಗೂ, ನಿಮ್ಮ ಮನೆಗೆ ತಲುಪಿಸುವ ವೆಚ್ಚ 50 ರೂಪಾಯಿ. ಅಲ್ಲಿಗೆ ತಿಂಗಳಿಗೆ ತಾವು 200 ರೂಪಾಯಿಗಳನ್ನ ಪಾವತಿಸಬೇಕಾಗುತ್ತದೆ. 'ಪ್ಲೇಬಾಯ್' ಗೆ ಚಂದಾದಾರರಾಗಿದ್ದಕ್ಕೆ ಮತ್ತೊಮ್ಮೆ ತಮಗೆ ಹೃತ್ಪೂರ್ವಕ ಧನ್ಯವಾದ ಹಾಗೂ ಅಭಿನಂದನೆಗಳನ್ನ ಸಲ್ಲಿಸುತ್ತಿದ್ದೇವೆ. ಶುಭದಿನ" !! 
ನಿಮಗೆ ಆಶರ್ಯ! "ಅರೆ! ಇದೇನಿದು?! ನಾನ್ ಯಾವಾಗ ಈ ಕಾಮ ಪುಸ್ತಕಗಳಿಗೆ ಚಂದಾದಾರನಾಗಿದ್ದೆ?!" ನಿಮ್ಮ ನೆನಪಿನ ಶಕ್ತಿಯ ಬಗ್ಗೆ ನೀವೇ ಅನುಮಾನ ಪಡುತ್ತೀರಿ. "ಒಮ್ಮೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳೋಣವೇ" ಎಂಬ ಆಲೋಚನೆ ಸಹ ನಿಮ್ಮ ಮನಸ್ಸಿನಲ್ಲಿ ಒಂದು ಕ್ಷಣ ಬಂದು ಹೋಗುತ್ತದೆ! :D :D  
ಇಲ್ಲ ಬಿಡಿ. 'ಪ್ಲೇಬಾಯ್' ಹಾಗೆಲ್ಲಾ ಕೆಳಮಟ್ಟದ ಕೆಲಸ ಮಾಡೋಲ್ಲ. ತಾನು Sex/Pornographic Industry ಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೆಮ್ಮೆಯಿಂದಲೇ ಹೇಳಿಕೊಂಡು ತಿರುಗಾಡುತ್ತದೆ. Subscribe ಮಾಡಿದವರಿಗೆ ಮಾತ್ರ ತನ್ನ 'ಉತ್ಪನ್ನ'ಗಳನ್ನ ಕಳುಹಿಸುತ್ತದೆ. ಹೇಳೋದೊಂದು, ಮಾಡೋದೊಂದು ಇಲ್ಲ. ಹೇಳಿದ್ದನ್ನೇ ಮಾಡುತ್ತದೆ ಮತ್ತೆ ಮಾಡಿದ್ದನ್ನೇ ಹೇಳುತ್ತದೆ. ಬಹುಷಃ ಅದೇ ಕಾರಣದಿಂದಲೇ ಇರಬಹುದೇನೋ, ಕಾಮ ಉದ್ಯಮ ದಲ್ಲಿ ತೊಡಗಿಸಿಕೊಂಡಿದ್ದರೂ, ಒಂದು ರೀತಿಯ 'ಪ್ರತಿಷ್ಠೆ'ಯನ್ನ ಕಾಪಾಡಿಕೊಂಡಿದೆ. ಜನರನ್ನ ನಾನು ಮೇಲೆ ಹೇಳಿದ ಕಥೆಯಂತೆ ಹುಚ್ಚಾಸ್ಪತ್ರೆಗೆ ಸೇರಿಸುವಂತಹ ಲುಚ್ಚಾ ಕೆಲಸ ಮಾಡುವುದಿಲ್ಲ. ಅಂತಹ ಕೆಲಸ ಮಾಡುವುದೇನಿದ್ದರೂ 'ಭಾರ'ತೀ ಏರ್ಟೆಲ್ ನಂತಹ ಹಸಿದ ಭಾರತೀಯ ಕಂಪನಿಗಳು ಮಾತ್ರ! ಮೇಲೆ 'ಮಹಾ ದೇಶಭಕ್ತ' ಕಂಪನಿ ಎಂಬಂತೆ ಪೋಸು ಕೊಡೊ ಏರ್ಟೆಲ್, ಒಳಗೊಳಗೇ ಮಾಡುತ್ತಿರುವುದು ಮಾತ್ರ ತನ್ನ ದೇಶದ ಮಾನ ಮರ್ಯಾದೆ ಹರಾಜು ಹಾಕುವಂತಹ ಲುಚ್ಚಾ-ಕೆಳಮಟ್ಟದ ಕೆಲಸಗಳು. ಏನದು ಅಂತೀರಾ? ಜನರ 'ನೆನಪಿನ ಶಕ್ತಿ'ಗೇ ಸವಾಲು ಒಡ್ಡುವಂತಹ ಮೆಸೇಜುಗಳು! ನನಗೆ ಏರ್ಟೆಲ್ ನ ಈ ಹುಚಾಟ ಗಮನಕ್ಕೆ ಬಂದಿದ್ದು ಕಳೆದ ವರ್ಷ. ಅಂದಿನಿಂದ ಇಂದಿನವರೆಗೂ ಏರ್ಟೆಲ್ ನ 'ಹುಚ್ಚಾಟ' ಗಳನ್ನ 'save' ಮಾಡಿಕೊಂಡಿದ್ದೇನೆ. ನಿಮ್ಮೊಂದಿಗೆ ಹಂಚಿಕೊಳ್ಳಲೆಂದು. ಒಂದೊಂದಾಗೇ ಓದಿ. ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ.


1- Service Message : Sizzling Bikini Girls waiting 2 be on your mobile. Click 2 Have Fun. Adress:http://202.87.41.147/hungamawap/airtel/85715/promo.php3
ಇಂತಹ ಮೆಸೇಜು ಲೆಕ್ಕವಿಲ್ಲದಷ್ಟು ಬಾರಿ ನನ್ನ ಮೊಬೈಲ್ ಗೆ ಬಂದಿದೆ. ಕೆಲವೊಮ್ಮೆ ಇದೇ ರೀತಿಯದು ಬಂದರೆ, ಮತ್ತೆ ಕೆಲವೊಮ್ಮೆ 'Sizzling Bikini' ಬದಲಾಗಿ 'ನಮಿತಾ', 'ಐಶ್ವರ್ಯಾ ರೈ' ಕುಳಿತಿರುತ್ತಾರೆ. ಈ ತರಹದ ಮೆಸೇಜುಗಳು ಬಂದ ಕೂಡಲೇ, ದಿಲೀಟು ಮಾಡಿಬಿಡುವ ಅಭ್ಯಾಸ ಬೆಳೆಸಿಕೊಂಡಿದ್ದೆ. ಒಂದು ದಿನ ಇದೇ ರೀತಿಯ 'ನಮಿತಾ ಬಿಕಿನಿ' ಮೆಸೇಜು ಬಂತು. ಎಂದಿನಂತೆ ದಿಲೀಟು ಮಾಡಿದೆ. ಆಮೇಲೆ ಯಾಕೋ ನನ್ನ ಕರೆನ್ಸಿ ಚೆಕ್ ಮಾಡಿ ನೋಡುತ್ತೇನೆ, ಐವತ್ತು ರೂಪಾಯಿ ಕಟ್!


2- ಮತ್ತದೇ Service Message ಹೆಸರಿನಡಿ, "ಗೇಮ್ ಡೌನ್ಲೋಡ್ ಮಾಡಿಕೊಳ್ಳಿ" ಎಂಬ ಮೆಸೇಜು ಹಾಗೂ ಆದರೆ ಜೊತೆ ಒಂದು link ಬಂತು. ಇಂತಹವುಗಳನ್ನ ಡಿಲೀಟು ಮಾಡಿ ಮಾಡಿ ಅಭ್ಯಾಸವಾಗಿದ್ದ ನನಗೆ, ಇದನ್ನ ನೋಡೋಣ ಇವರ ಬಂಡವಾಳ ಏನೆಂಬುದು ಗೊತ್ತಾಗುತ್ತದೆ ಎಂದು ಆ link ಅನ್ನ ಒತ್ತಿದೆ. ಏನೂ ಆಗಲಿಲ್ಲ! ಒಂದೆರಡು ನಿಮಿಷದ ನಂತರ AD- 54321 ನಿಂದ ಮತ್ತೊಂದು ಮೆಸೇಜು ಬಂತು- "Thanks for downloading JGame Pack from Airtel. You have been charged Rs. 50. Play Games at Re.1 http://203.115.112.5/GCLite" ಪುನಃ ಏರ್ಟೆಲ್ ನಿಂದ ಬಂದ ಈ ಮೆಸೇಜಿನಲ್ಲಿ ಮತ್ತೊಂದು ಲಿಂಕ್ ಕಳುಹಿಸಿದಾಗಲೇ ಗೊತ್ತಾಯಿತು, ದುಡ್ಡು ಹೊಡೆಯಲು ಅದೊಂದು ನಕಲಿ ಲಿಂಕ್ ಎಂದು!


3- ಮತ್ತೊಂದು ದಿನ AD-54321 ನಿಂದ - "Thanks for using FS-Airtel Music Portal subscription service from Airtel. you have been charged Re.1" ಅಲ್ಲಾ ಸ್ವಾಮೀ, FS-Airtel Music Portal ಅಂದ್ರೆ ಏನದು?! ಏನ್ 'ಸರ್ವೀಸ್' ಅದು?! ನಾನ್ಯಾವಾಗ ಇದಕ್ಕೆ 'subscribe' ಮಾಡಿದ್ದೆ?!


4- ಸೆಕ್ಸ್ ಚಾಟ್/ಫೋನ್ ಸೆಕ್ಸ್ ಎಂಬ ಪದಗಳನ್ನ ನೀವು ಕೇಳಿರುತ್ತೀರಿ. ಫೋನ್ ಕರೆಯ ಮೂಲಕ ಜಾಹಿರಾತು ಮಾಡುವುದು ಇದೆಯಲ್ಲಾ, ಅದೇ ರೀತಿ ನನಗೊಂದಿನ ಕರೆ ಬಂತು. ಕರೆ ಸ್ವೀಕರಿಸಿದೆ. ಆಕಡೆಯಿಂದ ಹೆಣ್ಣು ಧ್ವನಿಯ ಕಂಪ್ಯೂಟರೀಕೃತ ಜಾಹಿರಾತು ಶುರುವಾಯಿತು. ನಾಲ್ಕೈದು ಹೆಣ್ಣು ಮಕ್ಕಳ ಹೆಸರುಗಳನ್ನ ಹೇಳಿತು. ನಂತರ, "ಇವರೆಲ್ಲರೂ ಈಗ ಲೈನ್ ನಲ್ಲಿದ್ದಾರೆ, ಯುವಕರೊಂದಿಗೆ ಹರಟುತ್ತಿದ್ದಾರೆ! ನಿಮ್ಮೆಲ್ಲಾ 'ಪ್ರಶ್ನೆ' ಗಳಿಗೆ ಉತ್ತರಿಸಲಿದ್ದಾರೆ!" ಎಂದಿತು!:D ಕರೆ ಕಟ್ ಮಾಡಿದೆ. ಆ ಜಾಹಿರಾತು ಆಲಿಸಲು ಮುಂದುವರಿಸಿದ್ದರೆ, ಬಹುಷಃ "ಈ 'ಸೇವೆ'ಯನ್ನ ಪಡೆಯಲು #$%^# ಗೆ ಎಸ್.ಎಂ.ಎಸ್ ಮಾಡಿ ಅಂತಲೋ, ಈ 'ಸೇವೆ'ಗೆ ಇಷ್ಟು 'charge' ಮಾಡಲಿದ್ದೇವೆ ಅಂತಲೋ ಆ ಜಾಹಿರಾತು ಹುಡುಗಿ ಹೇಳುತ್ತಿದ್ದಳೇನೋ! 
ಒಂದೆರಡು ನಿಮಿಷಗಳ ನಂತರ ಒಂದು ಮೆಸೇಜು ಬಂದಿತು. "ಧನ್ಯವಾದ. ಈ 'ಸೇವೆ'ಗಾಗಿ ನಿಮಗೆ 30 ರೂಪಾಯಿಗಳನ್ನ  charge ಮಾಡಲಾಗಿದೆ" !!  WTF!:D


5- ಒಂದು ದಿನ ಹೀಗೆ ನನ್ನ ಮೊಬೈಲ್ ಗೆ AX- 543211 ನಿಂದ ಒಂದು ಮೆಸೇಜು ಬಂತು - "Your subscription to HelloTunes is due for renewal. You will be charged Rp 30 on 06-08-2011" ! 
ಇದು ಒಳ್ಳೆ ಸೂ*ಮಕ್ಕಳ ಸಹವಾಸವಾಯಿತಲ್ಲಾ! ನಾನ್ ಯಾವಾಗ ಇದಕ್ಕೆ subscribe ಮಾಡಿಕೊಂಡಿದ್ದೆ ಎಂದುಕೊಂಡೆ. ಯಾವುದೋ ಕೆಲಸದಲ್ಲಿ ಬಿಜಿ ಇದ್ದ ನಾನು, ಆ ಮೆಸೇಜಿನ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆ ಮೆಸೇಜಿನ ಬಗ್ಗೆ ಮರೆತೇ ಹೋಗಿತ್ತು. ಒಂದಷ್ಟು ದಿನಗಳು ಕಳೆದ ನಂತರ ನನ್ನ ಅಕ್ಕ ನನಗೆ ಹಾಗೆ ಸುಮ್ಮನೆ ಕರೆ ಮಾಡಿದಳು. ಕರೆ ಸ್ವೀಕರಿಸುತ್ತಿದ್ದಂತೆಯೇ "ಲೋ ಅದೇನು ಹೊಲಸು ಸಾಂಗು ಹಾಕಿಕೊಂಡಿದ್ದೀಯೋ?! ಮೊದಲು ತೆಗೆ ಅದನ್ನ" ಎಂದಳು! ನನಗೆ ಆಶ್ಚರ್ಯ! ಇವಳು ಯಾವುದರ ಬಗ್ಗೆ ಮಾತನಾಡುತ್ತಿದ್ದಾಳೆ ಎಂಬುದೇ ಗೊತ್ತಾಗಲಿಲ್ಲ. ಸರಿ. ಆಕೆಯೊಂದಿಗೆ ಮಾತು ಮುಗಿಸಿದ ನಂತರ, ಮತ್ತೊಂದು ಮೊಬೈಲ್ ಕಯ್ಯಿಗೆತ್ತಿಕೊಂಡು ನನ್ನ ಮೊಬೈಲ್ ಗೆ ಕರೆ ಮಾಡಿ ನೋಡಿದರೆ, ದಂಗಾಗುವ ಸರದಿ ನನ್ನದಾಗಿತ್ತು! ಯಪ್ಪಾ! ಯಾವುದೋ ಕಿತ್ತೋಗಿರೋ ಗೋಳಿನ ಹಾಡೊಂದು, ದರಿದ್ರ ಹಾಡೊಂದು ನನ್ನ 'HelloTune' ಆಗಿಹೋಗಿತ್ತು! ಅದು ಹೇಗೆ ನನ್ನ 'HelloTune' ಆಗಿಹೋಯಿತು ಎಂಬುದು ಮಾತ್ರ ಈಗಲೂ ಒಂದು 'Mystery'! :D ಸಧ್ಯ. ಇನ್ನೊಬ್ಬರ ಮುಂದೆ ನನ್ನ ಮಾನ ಮರ್ಯಾದೆ ಹೋಗುವ ಮುನ್ನ ನನ್ನ ಅಕ್ಕ ನನಗೆ ಎಚ್ಚರಿಸಿದಳು. ಆಕೆಗೆ ಮನಸ್ಸಿನಲ್ಲಿಯೇ  ಥ್ಯಾಂಕ್ಸ್ ಹೇಳಿದೆ. ಇದೇ ರೀತಿ ನನಗೆ ಎರಡು ಬಾರಿ ಆಗಿದೆ ಸ್ನೇಹಿತರೆ. ಇದಾದ ಬಳಿಕ ಎರಡನೇ ಬಾರಿ AX- 543211 ನಿಂದ  ಕೆಲ ದಿನಗಳ ನಂತರ ನನಗೆ ಬಂದ ಮತ್ತೊಂದು ಮೆಸೇಜ್- "Thanks for subscribing to MyTunes. Enjoy Free MyTunes subscription for first 10 days. To Unsubscribe Dial 54345808(Toll Free)." 


6- ಏರ್ಟೆಲ್ ನ ಹುಚ್ಚಾಟ ಇಲ್ಲಿಗೇ ನಿಲ್ಲುವುದಿಲ್ಲ ಸ್ನೇಹಿತರೆ. ಇದ್ದಕ್ಕಿದ್ದಂತೆಯೇ ನನ್ನ ಮೊಬೈಲ್ ಗೆ ನಟಿ ರಮ್ಯಾ ಳ ಬಗ್ಗೆ ಮೆಸೇಜು ಗಳು ಬರಲಾರಂಭಿಸಿದವು. ಆಕೆ ಟ್ವಿಟ್ಟರ್ ನಲ್ಲಿ ಏನೇನು ಅಪ್ಡೇಟ್ ಮಾಡುತ್ತಾಳೋ, ಅವೆಲ್ಲವನ್ನೂ ಏರ್ಟೆಲ್ ಕಾಪಿ ಮಾಡಿ ಕಳುಹಿಸುತ್ತಿತ್ತು. ನನಗೆ ಏರ್ಟೆಲ್ ಗೆ ಕರೆ ಮಾಡಿ, ಇದನ್ನ ನಿಲ್ಲಿಸಿ ಎಂದು ಹೇಳಲೂ ಸಹ ಪುರುಸೊತ್ತಿರಲಿಲ್ಲ. ಆದರೆ ದಿನಕ್ಕೆ ಇದರಿಂದ ಎರಡು ರೂಪಾಯಿ ಕಟ್ ಆಗುತ್ತಿದ್ದುದ್ದು ಗಮನಕ್ಕೆ ಬಂದಿರಲಿಲ್ಲ. ಒಂದು ದಿನ ಗೊತ್ತಾಯಿತು. ದಿನಕ್ಕೆ ಸುಮ್ಮ ಸುಮ್ಮನೆ ಎರಡು ರೂಪಾಯಿ ಕಟ್ ಆಗುತ್ತಿದ್ದುದ್ದು ಗಮನಕ್ಕೆ ಬಂತು. ಸರಿ ಏರ್ಟೆಲ್ ಗೆ ಕರೆ ಮಾಡಿ ಕೇಳಿಯೇ ಬಿಡೋಣ ಅಂತ ಕರೆ ಮಾಡಿದೆ. ಗೌರವಾನ್ವಿತ/ಮರ್ಯಾದಸ್ಥ ಕುಟುಂಬದಲ್ಲಿ ಜನಿಸಿದ ನನಗೆ ಆ ಏರ್ಟೆಲ್ ಸಿಬ್ಬಂದಿಗೆ ಸೂ*ಮಗನೇ, ಬೊ* ಮಗನೇ ಎಂಬಂತಹ ಪದಗಳು ಬಳಕೆ ಮಾಡುವುದು ಬೇಡ ಎಂದನಿಸಿ, ಸಮಾಧಾನವಾಗಿಯೇ "ಏನಪ್ಪಾ ರಾಜಾ ನಿಮ್ಗಳ ಈ ಹೊಲಸಾಟ?!" ಎಂದೆ. ಅದಕ್ಕವ "ಸಾರ್ ನೀವು ನಮಿತಾ ಹಾಗೂ ರಮ್ಯಾ ಗಳನ್ನ subscribe ಮಾಡಿಕೊಂಡಿದ್ದೀರಾ" ಎಂದ. ನನಗೆ ಪಿತ್ತ ನೆತ್ತಿಗೇರಿದರೂ, ಮತ್ತೆ ಸಮಾಧಾನವಾಗಿಯೇ "ಇಲ್ಲ ರಾಜಾ, ನನಗೆ ಮಾಡಲು ಬೇರೇ ಬೇಕಾದಷ್ಟು ಕೆಲಸಗಳಿವೆ, ಮೊದಲು ಅವನ್ನ ನಿಲ್ಲಿಸು" ಎಂದೆ. ಸ್ವಲ್ಪ ಸಮಯದ ನಂತರ 56060 ರಿಂದ ಮೆಸೇಜು ಬಂತು - "Dear subscriber, you  have been successfully unsubscribed from Funtime Namitha subscription"


7- ಫೋನ್ ಕರೆ ಬಂದಂತೆ ಮಾಡಿ, ಕಂಪ್ಯೂಟರೀಕೃತ ಜಾಹಿರಾತು ಕೊಡುವುದು ಇದೆಯಲ್ಲ, ಅದು ಜಗತ್ತಿನ ಅತ್ಯಂತ Irritate ಮಾಡುವಂತಹ ವಿಚಾರಗಳಲ್ಲೊಂದು. ಮೊದಮೊದಲು ಅಪರೂಪಕ್ಕೆ ಬರುತ್ತಿದ್ದ ಇಂತಹ ಕರೆಗಳು, ನಂತರ ಏರ್ಟೆಲ್ ನಿಂದ ದಿನಕ್ಕೆ ನಾಲ್ಕೈದು ಬಾರಿ ಬರಲಾರಂಬಿಸಿದವು! ಒಂದು 'limit' ಅಂತಾರಲ್ಲ, ಏರ್ಟೆಲ್ ಅದನ್ನ ದಾಟಿ ಬಿಟ್ಟಿತ್ತು. +911400410012, +911400410012, +911400410030, +911400410019, +911400410014, +911409765020. ಹೀಗೆ ಬೇರೆ ಬೇರೆ ನಂಬರ್ ಗಳಿಂದ ನಿರಂತರವಾಗಿ ಜಾಹಿರಾತು ಕರೆ ಮಾಡೋದು! ಒಂದು ವೇಳೆ ಇಂತಹ ಜಾಹಿರಾತು ಕರೆ ಸ್ವೀಕರಿಸಲಿಲ್ಲ ಅಂತ ಇಟ್ಟುಕೊಳ್ಳಿ, ಒಂದಷ್ಟು ಹೊತ್ತು ಬಿಟ್ಟು ಮತ್ತೆ ಕರೆ ಮಾಡುವುದು! 'ಪಾಗಲ್ ಪ್ರೇಮಿ'ಗಳು ವರ್ತಿಸುತ್ತಾರಲ್ಲಾ, ಹಾಗೆ! :D Psycho! :D


8- ಮೊನ್ನೆ ನನ್ನ ಫೋನ್ currency ರಿಚಾರ್ಜ್ ಮಾಡಿಸಿದೆ. ಮಾಡಿಸಿದ್ದಕ್ಕೆ 50MBಗಳಷ್ಟು ಉಚಿತ ಬ್ರೌಸಿಂಗ್ ಮಾಡಬಹುದು(ಎರಡು ದಿನಗಳ ಒಳಗೆ) ಎಂದು ಏರ್ಟೆಲ್ ಹೇಳಿತುಸರಿನಪ್ಪ. 20MB ಯ ಒಂದು ಫೈಲ್ ಅನ್ನ ಡೌನ್ಲೋಡ್ ಮಾಡೋಣ ಅಂತ ಡೌನ್ಲೋಡ್ ಗೆ ಹಾಕಿದೆ. ಅದೇಕೋ ಅರ್ಧಕ್ಕೇ ನಿಂತಿತು. ಆಮೇಲೆ ಮೆಸೇಜ್ ಬಂದಿತು. "ನೀವು 102MB ಬಳಕೆ ಮಾಡಿದ್ದೀರಎಂದು ಮಿಕ್ಕಿರುವ ಬ್ಯಾಲೆನ್ಸ್ ತೋರಿಸಿತು. ನೋಡಿದರೆ 60 ರೂಪಾಯಿ ಕಟ್! :D 


9- ಇದೇ ರೀತಿಯ ಮೆಸೇಜುಗಳು ನಮ್ಮ ತಂದೆಯ ಮೊಬೈಲಿಗೂ ಬರುತ್ತಿದ್ದವು. ಕೆಲಸದಲ್ಲಿ ವಿಪರೀತ ಬಿಜಿ ಇರುವ ಅವರಿಗೆ ಇವುಗಳ ಬಗ್ಗೆ ಗಮನ ಹರಿಸಲು ಸಮಯವಿರಲಿಲ್ಲ. ಆದರೆ ಇಂದು ನಮ್ಮ ತಂದೆ ಸ್ವಲ್ಪ ಬಿಡುವಿನಲ್ಲಿದ್ದರು. ಅವರ ಮೊಬೈಲಿಗೆ ಇಂದು ಏರ್ಟೆಲ್ ನಿಂದ ಬಂದ ಮೆಸೇಜ್- "Congratulations! You have been successfully activated on KanMovNews MMS Alert_Ascenso MMS. You have been charged Rs 2 for 1 day. To #unsubscribe dial *321*868#." ಏರ್ಟೆಲ್ ನ ವರಸೆ ಹೇಗಿದೆ ನೋಡಿ. Subscribe ಮಾಡಿಲ್ಲದ ಈ Subscription ಅನ್ನ cancel ಮಾಡಲು *321*868# ಗೆ ಕರೆ ಮಾಡಬೇಕಂತೆ. ಅದಕ್ಕೆ ನಿಮಿಷಕ್ಕೆ 50Ps ಶುಲ್ಕವಂತೆ! ಅವರುಗಳು ಹೇಳೋದು ಯಾವ ರೀತಿ ಇದೆ ಅಂದರೆ- "ನಿಮ್ಮ ಮೇಲೆ ನಾವು ಸಗಣಿ ಹಾಕಿದ್ದೇವೆ, ನಿಮಗೆ ಈ ಸಗಣಿ ಇಷ್ಟವಾಗಲಿಲ್ಲ ಅಂದರೆ ನಮಗೆ ಈ *321*868# ನಂಬರ್ ಗೆ ಕರೆಮಾಡಿ, ಆ ಸಗಣಿಯನ್ನ ತೆಗೆಯುತ್ತೇವೆ, ಅದಕ್ಕೆ ನಿಮಿಷಕ್ಕೆ 50Ps ಶುಲ್ಕ ವಿಧಿಸುತ್ತೇವೆ"!:D ಪಾಪ ಏರ್ಟೆಲ್ ಗೆ ತಾನು ಕೆಣಕಿರುವುದು ಒಬ್ಬ ಹಿರಿಯ ಸರಕಾರಿ ಅಧಿಕಾರಿಯನ್ನ ಎಂದು ಗೊತ್ತಿರಲಿಲ್ಲ ಅಂತ ಕಾಣಿಸುತ್ತೆ! :D ಮೆಸೇಜ್ ಓದಿ ಸಿಕ್ಕಾಪಟ್ಟೆ ಕೋಪ ಗೊಂಡ ನಮ್ಮ ತಂದೆ ಏರ್ಟೆಲ್ ಗೆ ಕರೆಮಾಡಿ ಗ್ರಹಚಾರ ಬಿಡಿಸಿದರು! ಅಲ್ಲಿದ್ದ ಸಿಬ್ಬಂದಿ ಚೆಡ್ಡಿಯಲ್ಲೇ ಉಚ್ಚೆ ಹೊಯ್ದುಕೊಂಡಿದ್ದರೂ ಆಶರ್ಯವಿಲ್ಲ! :D


10- ಏರ್ಟೆಲ್ ನ ಹುಚ್ಚಾಟದ ಬಗೆಗಿನ ಈ ಬ್ಲಾಗನ್ನ ಕೇವಲ ಒಂಬತ್ತು ಪಾಯಿಂಟ್ ಗಳಲ್ಲಿ ಹೇಳಿ ಕಳೆದ ವರ್ಷ Nov 13 2011 ರಂದೇ ಪ್ರಕಟಿಸಿದ್ದೆ. ಆದರೆ  ಮೊನ್ನೆ(5/01/2012) ರಂದು ಏರ್ಟೆಲ್ ನಿಂದ ಮತ್ತೆ ಇಂತಹದೇ ಒಂದು ಮೆಸೇಜು ಬಂದಿದ್ದರಿಂದ ಹತ್ತನೆಯದನ್ನ ಸೇರಿಸಿ ಮರು ಪ್ರಕಟಿಸುತ್ತಿದ್ದೇನೆ. ಮೊನ್ನೆ(5/01/2012)  ಇದೇ ತರಹದ ಮತ್ತೊಂದು ಮೆಸೇಜು AD-54321ರಿಂದ ಬಂತು. "Thanks for using MMS subscription service from Airtel. You have been charged Rs 2.0." ಅಂತು! ಯಪ್ಪ! ಇನ್ನು ಇದರೊಂದಿಗೆ ಮುಂದುವರಿಯುವುದು ಸಾಧ್ಯವಿಲ್ಲ ಎಂದು ಡಿಸೈಡು ಮಾಡಿಬಿಟ್ಟೆ! ಅಂದು ಸಂಜೆ ಕಸ್ಟಮರ್ ಕೇರ್ ಗೆ ಕರೆ ಮಾಡಿ, ನಿಮಗೇನಾದರೂ ತಲೆ ಕೆಟ್ಟಿದೆಯಾ ಎಂದು ಕೇಳಿದೆ. ಆಕಡೆಯಿಂದ ಆ ಕಸ್ಟಮರ್ ಕೇರ್ executive ನನಗೇ ತಲೆ ಕೆಟ್ಟಿದೆ ಎಂಬಂತೆ ಮಾತನಾಡಿದ!  "ನೀವು ಇಂಟರ್ ನೆಟ್ ಮೂಲಕ ಆ 'ಸೇವೆ' ಗೆ activate ಮಾಡಿಕೊಂಡಿದ್ದೀರಾ" ಎಂದ. ಲೋ ಸೂಳೇಮಗನೇ, ನನಗೆ ಮಾಡೋಕೆ ಬೇರೆ ಬೇಕಾದಷ್ಟು ಒಳ್ಳೆ ಕೆಲಸಗಳಿವೆ. ಬೇಕಾದರೆ ನಮ್ಮ ಮನೆಗೆ ಬಾ. ನಿನಗೆ browsing history ತೋರಿಸುತ್ತೇನೆ. ನಾನು ಇವತ್ತು ಏನೇನು website ಗಳನ್ನ ನೋಡಿದ್ದೇನೆ ತೋರಿಸುತ್ತೇನೆ ಬಾ ಎಂದೆ. ಅದಕ್ಕವ "ನಿಮ್ಮ ಮನೆಗೇ ಬರಬೇಕೆಂದೇನೂ ಇಲ್ಲ. ನಮ್ಮ ಅಪ್ಪ್ಲಿಕೇಶನ್ನೇ ಹೆಳುತ್ತದೆ ಅಂದ. ನಾನು f**k ur application ಅಂದೆ (ಕನ್ನಡದಲ್ಲಿ). ಮುಚ್ಚಿಕೊಂಡು ಕಟ್ಟಾಗಿರುವ ಹಣವನ್ನ ವಾಪಸ್ ಸೇರಿಸಿದರೆ ಸರಿ. ಇಲ್ಲದಿದ್ದರೆ ಚೆನ್ನಾಗಿರೋಲ್ಲ ಅಂದೆ. ಮೊದಲು ವಾಪಸ್ ಸೇರಿಸಲು ನಿರಾಕರಿಸಿದ ಅವ ನಂತರ ಒಪ್ಪಿಕೊಂಡ. ಕಡೆಗೆ ಅವನಿಗೆ ಎಚ್ಚರಿಕೆಯನ್ನೂ ನೀಡಿದೆ. "ಇದೇ ರೀತಿ ಬಹಳಷ್ಟು ಜನರಿಗೆ ಆಗಿದೆ/ಆಗುತ್ತಿದೆ. ಇದು ಹೀಗೇ ಮುಂದುವರಿದಲ್ಲಿ ಒಂದು ದಿನ ಜನ ಕೆರ ತಗೊಂಡು ನಿಮ್ಮ ಕಛೇರಿಗೆ ಬರುತ್ತಾರೆ" ಅಂದು ಕರೆ ಕಟ್ ಮಾಡಿದೆ.  ಸ್ವಲ್ಪ ಹೊತ್ತಿನ ನಂತರ AX-airtelMO ನಿಂದ ಒಂದು ಸಂದೇಶ ಬಂತು- "Rs2 has been credited to your Airtel mobile.." ಆದರೆ ಅಸಲಿಗೆ ಅವರು ವಾಪಸ್ ಮಾಡಿದ್ದು ಒಂದೇ ರೂಪಾಯ್! 


ಅಲ್ಲ, ಏರ್ಟೆಲ್ ಗೆ ಅದೇನು ಅಂತಹ ಹುಚ್ಚು ಹಸಿವು? ನಾವೊಬ್ಬರೇ ಅಲ್ಲ, ಬಹಳಷ್ಟು ಮಂದಿ ಏರ್ಟೆಲ್ ವಿರುದ್ಧ ಇಂತಹ ದೂರುಗಳನ್ನ ಹೇಳುತ್ತಿದ್ದಾರೆ. ಅಷ್ಟೊಂದು ದೂರುಗಳಿದ್ದರೂ ಏರ್ಟೆಲ್ ತನ್ನ ದಂಧೆಯನ್ನ ಮುಂದುವರಿಸಿಕೊಂಡು ಹೋಗುತ್ತಿರುವುದು ನೋಡಿದರೆ ಅದು ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟು ನಿಂತಿದೆ ಎಂಬುದು ಗೊತ್ತಾಗುತ್ತದೆ. ಜನ ತಾವು subscribe ಮಾಡಿಲ್ಲದ subscription ಗಳನ್ನ cancel ಮಾಡಲು ಮಾಡುವ ಕರೆಗಳಿಗೂ ಶುಲ್ಕ ವಿಧಿಸುತ್ತಿರುವುದನ್ನ ನೋಡಿದರೆ, ಅದು ಎಂತಹ ಬರ ಗೆಟ್ಟ, ಕೆಳ ಮಟ್ಟಕ್ಕಿಳಿದಿರುವ ಸಂಸ್ಥೆ ಎಂದು ಗೊತ್ತಾಗುತ್ತದೆ. 


ನಾನು ಏರ್ಟೆಲ್ ಅನ್ನ ನನ್ನ ಫೋನ್ ನಿಂದ ತೆಗೆದು ಬಿಸಾಡಲು ನಿರ್ಧರಿಸಿದ್ದೇನೆ. ನೀವು?